Today's Panchang
September 30, 2026
ಈ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಯಾವ ದಿನ ಆಚರಿಸಬೇಕು?
Festivals Festivals & Rituals

ಈ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಯಾವ ದಿನ ಆಚರಿಸಬೇಕು?

ಈ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ವಿಶೇಷವಾಗಿ ಆಗಸ್ಟ್ 28, ಶುಕ್ರವಾರದಂದು ಹುಣ್ಣಿಮೆ ಇರುವುದರಿಂದ, ಅದೇ ದಿನ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಬೇಕೇ ಎಂಬ ಪ್ರಶ್ನೆ ಅನೇಕರಲ್ಲಿದೆ.

ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ಸಂಪ್ರದಾಯ. ವರಮಹಾಲಕ್ಷ್ಮೀ ವ್ರತದ ಕಥೆಯಲ್ಲಿ ಚಾರುಮತಿ ದೇವಿಯು ಶ್ರಾವಣ ಮಾಸದ ಶುಕ್ರವಾರದಂದು ಸಾಯಂಕಾಲ ವ್ರತವನ್ನು ಆಚರಿಸಿದ ಪ್ರಸಂಗವನ್ನು ಕಾಣಬಹುದು. ಆದ್ದರಿಂದ ಸಾಯಂಕಾಲ, ವಿಶೇಷವಾಗಿ ಗೋಧೂಳಿ ಮುಹೂರ್ತದಲ್ಲಿ ವ್ರತಾಚರಣೆ ಮಾಡುವುದು ಅತ್ಯಂತ ಪ್ರಶಸ್ತವೆಂದು ಪರಿಗಣಿಸಲಾಗುತ್ತದೆ.

ಬೆಂಗಳೂರಿನಲ್ಲಿ ಆಗಸ್ಟ್ 21ರಂದು ಗೋಧೂಳಿ ಮುಹೂರ್ತ ಸಂಜೆ 6:25ರಿಂದ 6:49ರವರೆಗೆ ಇರುತ್ತದೆ. ಈ ಸಮಯದಲ್ಲಿ ವರಮಹಾಲಕ್ಷ್ಮೀ ಪೂಜೆ ಮತ್ತು ವ್ರತಾಚರಣೆ ಮಾಡುವುದು ಅತ್ಯಂತ ಪ್ರಶಸ್ತ.

2026ರಲ್ಲಿ ಆಗಸ್ಟ್ 28, ಶುಕ್ರವಾರದಂದು ಹುಣ್ಣಿಮೆ ಬರುತ್ತದೆ. ಆದರೆ ಆ ದಿನ ಸಾಯಂಕಾಲದ ವೇಳೆಗೆ ಕೃಷ್ಣ ಪಕ್ಷದ ಪ್ರತಿಪದೆ ತಿಥಿ ಆರಂಭವಾಗುವುದರಿಂದ, ಆ ದಿನ ಸಾಯಂಕಾಲ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ಸೂಕ್ತವಲ್ಲ. ಆದ್ದರಿಂದ ಆಗಸ್ಟ್ 21, ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ಶಾಸ್ತ್ರಸಮ್ಮತವಾಗಿದೆ.

ಸಾಧ್ಯವಿರುವವರು ಬೆಳಗ್ಗೆಯಿಂದ ಉಪವಾಸವಿದ್ದು, ಸಂಜೆ ಗೋಧೂಳಿ ಮುಹೂರ್ತದಲ್ಲಿ ಪೂಜೆ ಮತ್ತು ವ್ರತವನ್ನು ಆಚರಿಸಬಹುದು. ಆದರೆ ಕೆಲಸದ ಒತ್ತಡ, ಇತರ ಅನಿವಾರ್ಯ ಕಾರಣಗಳು ಅಥವಾ ಸಂಜೆವರೆಗೆ ಉಪವಾಸವಿರುವುದು ಕಷ್ಟವಾಗುವ ಪರಿಸ್ಥಿತಿ ಇರುವವರು ತಮ್ಮ ಶಕ್ತಿಗೆ ಅನುಗುಣವಾಗಿ ಅಲ್ಪಾಹಾರ ಅಥವಾ ಕನಿಷ್ಠ ಭೋಜನವನ್ನು ಸೇವಿಸಿ ವ್ರತವನ್ನು ಆಚರಿಸಬಹುದು. ಕೆಲವರಿಗೆ ಸಾಯಂಕಾಲದಲ್ಲಿ ವ್ರತಾಚರಣೆ ಮಾಡಲು ಸಾಧ್ಯವಾಗದಿದ್ದರೆ, ತಮ್ಮ ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಬೆಳಗ್ಗೆಯೇ ವ್ರತಾಚರಣೆ ಮಾಡಬಹುದು.

ವರಮಹಾಲಕ್ಷ್ಮೀ ಪೂಜೆಯಲ್ಲಿ ಲಕ್ಷ್ಮೀ ಸ್ವರೂಪವೆಂದು ಭಾವಿಸಲಾಗುವ ಸ್ಫಟಿಕದ ಆಮೆ, ಶಂಖ, ಕವಡೆ, ಗೋಮತಿ ಚಕ್ರ ಹಾಗೂ ಕಮಲದ ಬೀಜಗಳನ್ನು ಇಟ್ಟು ಪೂಜಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ವರಮಹಾಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂಬ ನಂಬಿಕೆ ಇದೆ.

ನಿಮಗೆ ವರಮಹಾಲಕ್ಷ್ಮೀ ಪೂಜೆಯ ಈ ಕಿಟ್ ಬೇಕಿದ್ದರೆ ನಮ್ಮ 9936051008 ಸಂಖ್ಯೆಯನ್ನು ಸಂಪರ್ಕಿಸಿ. ಇಂದೇ ಆರ್ಡರ್ ಮಾಡಬಹುದು.

ಧನ್ಯವಾದಗಳು.

ಶ್ರೀ ವರಮಹಾಲಕ್ಷ್ಮೀ ದೇವಿಯ ಅನುಗ್ರಹ ಎಲ್ಲರ ಮೇಲಿರಲಿ.

Leave a Reply

Your email address will not be published. Required fields are marked *