ಚತುರ್ಥಿ ಚಂದ್ರ ದರ್ಶನ ಅಪವಾದ
ಭಾದ್ರಪದ ಮಾಸದ ಚತುರ್ಥಿ ದಿನದಂದು (14/09/2026 ಸೋಮವಾರ) ಯಾರು ಚಂದ್ರನ ದರ್ಶನ ಮಾಡುತ್ತಾರೋ ಅವರುಗಳು, ಆ ಸಂವತ್ಸರದ ( ವರ್ಷದ )ಅಂತ್ಯದ ವರೆಗೂ ಅಪವಾದಕ್ಕೆ ಒಳಗಾಗುತ್ತಾರೆ, ಇದು ಧರ್ಮಶಾಸ್ತ್ರದಲ್ಲೇ ಉಲ್ಲೇಖವಾಗಿದೆ, ಇದಕ್ಕೆ ಪರಿಹಾರ :- ಸ್ಯಮಂತಪೋಖ್ಯಾನವನ್ನು ಆಲಿಸಬೇಕು ಅಥವಾ ಭಾದ್ರಪದ ಮಾಸದ ಬಿದಿಗೆಯಂದು (12/09/2026 ಶನಿವಾರ) ಯಾರು ಚಂದ್ರ ದರ್ಶನ ಮಾಡುತ್ತಾರೋ ಅವರಿಗೆ ಅಪವಾದ ದೋಷದ ಪರಿಣಾಮ ಬೀರುವುದಿಲ್ಲ, ಚಂದ್ರ
ಉಪಾಕರ್ಮ 2026: ವೇದಾಧ್ಯಯನಕ್ಕೆ ಪುನರ್‌ಸಂಕಲ್ಪ ನೀಡುವ ಪವಿತ್ರ ದಿನ
ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವೇದಾಧ್ಯಯನ, ಆಚಾರ-ವಿಚಾರ ಮತ್ತು ಆಧ್ಯಾತ್ಮಿಕ ಶಿಸ್ತಿಗೆ ವಿಶೇಷ ಮಹತ್ವ ನೀಡುವ ಉಪಾಕರ್ಮ ಆಚರಣೆಯು 2026ರಲ್ಲಿ ವಿವಿಧ ವೇದಶಾಖೆಗಳಿಗೆ ಅನುಗುಣವಾಗಿ ವಿಭಿನ್ನ ದಿನಗಳಲ್ಲಿ ನಡೆಯಲಿದೆ. ಉಪಾಕರ್ಮವನ್ನು ಕೆಲವೆಡೆ ಆವಣಿ ಅವಿಟ್ಟಂ ಎಂದೂ ಕರೆಯಲಾಗುತ್ತದೆ. ಈ ದಿನ ಯಜ್ಞೋಪವೀತ ಧಾರಣೆ, ವೇದಾಧ್ಯಯನದ ಪುನರಾರಂಭ ಹಾಗೂ ಋಷಿ ಸ್ಮರಣೆಯಂತಹ ಧಾರ್ಮಿಕ ವಿಧಿಗಳು ನಡೆಯುತ್ತವೆ. 2026ರಲ್ಲಿ ಋಗ್ವೇದ ಉಪಾಕರ್ಮವು ಆಗಸ್ಟ್ 26,
ಈ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಯಾವ ದಿನ ಆಚರಿಸಬೇಕು?
ಈ ವರ್ಷ ವರಮಹಾಲಕ್ಷ್ಮೀ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ವಿಶೇಷವಾಗಿ ಆಗಸ್ಟ್ 28, ಶುಕ್ರವಾರದಂದು ಹುಣ್ಣಿಮೆ ಇರುವುದರಿಂದ, ಅದೇ ದಿನ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಬೇಕೇ ಎಂಬ ಪ್ರಶ್ನೆ ಅನೇಕರಲ್ಲಿದೆ. ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದು ಸಂಪ್ರದಾಯ. ವರಮಹಾಲಕ್ಷ್ಮೀ ವ್ರತದ ಕಥೆಯಲ್ಲಿ ಚಾರುಮತಿ