Today's Panchang
September 30, 2026
12-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
Daily Horoscope

12-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

Sep 11, 2026

https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಅವರಿಗೆ ಪ್ರೀತಿ ತೋರಿಸಬೇಕು. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.
ಶ್ರದ್ದಾ ಭಕ್ತಿಯಿಂದ ನಿಮ್ಮ ಕುಲದೇವರನ್ನು ಸ್ಮರಿಸಿಕೊಳ್ಳಿರಿ.

ವೃಷಭರಾಶಿ
ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಯಾವುದೋ ಕಾರಣಕ್ಕೆ ನಿಮ್ಮಿಂದ ತಪ್ಪಾಗಿರುವುದನ್ನೆ ಪುನಃ ಪುನಃ ನೆನೆಸಿ ನಿಮಗೆ ಕಿರುಕುಳ ಕೊಡುವರು. ಇದು ಒಂದು ರೀತಿಯ ಪರೀಕ್ಷೆ ಕಾಲ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನು ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ರಾತ್ರಿಯಲ್ಲಿ ಪ್ರಯಾಣಿಸುವುದನ್ನು ಮತ್ತು ದೂರದ ಪ್ರಯಾಣವನ್ನು ತಪ್ಪಿಸಿ.
ಶ್ರೀ ಆಂಜನೇಯ ಸ್ವಾಮಿಯನ್ನು ಸ್ಮರಿಸಿ,

ಮಿಥುನ ರಾಶಿ
ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿ ಅನಗತ್ಯ ಸಂಶಯವನ್ನು ಹುಟ್ಟುಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣರಾಗುವಿರಿ. ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದಾದರು ಕೆಲವು ಅಮೂಲ್ಯ ವಸ್ತುವನ್ನು ಖರೀದಿಸಬಹುದು, ನಿಮ್ಮ ಆರೋಗ್ಯದ ಸ್ಥಿತಿಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಚಾಲನೆ ಮಾಡುವಾಗ ಜಾಗರೂಕರಾಗಿರಿ.
ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಿ,

ಕಟಕ ರಾಶಿ
ಯಾವುದೇ ಆರ್ಥಿಕ ಲಾಭವನ್ನು ನಿರೀಕ್ಷಿಸಲಾಗುವುದಿಲ್ಲ. ನೀವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಮತ್ತು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಬಾಸ್‌ನಿಂದ ಬೇಸತ್ತಿದ್ದರೆ, ಬಹುಶಃ ಹೊಸ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಲು ಇದು ಸೂಕ್ತ ಸಮಯ. ನಿಮ್ಮ ಸ್ನೇಹಿತರೊಂದಿಗೆ ಇಂದು ಸ್ವಲ್ಪ ಸಮಯವನ್ನು ಮೀಸಲಿಡಿ ಸಂಭಾಷಣೆ ನಡೆಸಿ.
ಈ ದಿನ ಸ್ತ್ರೀ ದೇವತಾ ಆರಾಧನೆಯಿಂದ ಪ್ರಮುಖ ಕಾರ್ಯಗಳನ್ನು ಸಿದ್ಧಿಸಿ ಕೊಳ್ಳುವಿರಿ,

ಸಿಂಹ ರಾಶಿ
ಇಂದು ನಿಮ್ಮ ರಾಶಿಯವರು ಕೆಲಸದಲ್ಲಿ ಪ್ರಭುದ್ಧತೆ ಮೆರೆಯಿರಿ. ಶಿಸ್ತು ಮತ್ತು ಸಂಯಮದಿಂದ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಸಾಗಲಿ. ನಿಮ್ಮಲ್ಲಿನ ವಿಶೇಷ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದು ನಿಶ್ಚಿತ. ಪ್ರೀತಿಯಲ್ಲಿ ಸಂತೋಷವಾಗಿರುವುದು ಹೇಗೆ ಎಂದು ತಿಳಿಯಿರಿ. ಸ್ವಯಂ ಭರವಸೆಯನ್ನು ಅಭ್ಯಾಸ ಮಾಡಿ ಮತ್ತು ನಿಮ್ಮ ಸ್ವಾಭಿಮಾನವನ್ನು ತಿಳಿದುಕೊಳ್ಳಿ.
ಗಣಪತಿಗೆ ದೇವರಿಗೆ ಗರಿಕೆ ನೀಡಿ,

ಕನ್ಯಾ ರಾಶಿ
ನಿಮ್ಮಲ್ಲಿ ಇಂದು ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ನಿಮ್ಮ ಸ್ವಂತ ನಿರ್ಧಾರಗಳಲ್ಲಿ ನಂಬಿಕೆ ಇಡಿ. ಇದು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸುತ್ತದೆ, ಇದು ನಿಮಗೆ ಆರ್ಥಿಕವಾಗಿಯೂ ಪ್ರಯೋಜನವನ್ನು ನೀಡುತ್ತದೆ.
ಶ್ರೀ ರಾಘವೇಂದ್ರ ಸ್ವಾಮಿಯನ್ನು ಪೂಜಿಸಿ

ತುಲಾ ರಾಶಿ
ಕುಟುಂಬದಲ್ಲಿ ಇಂದು ಕಲಹಗಳು ಹಾಗುವ ಸಾಧ್ಯತೆಗಳು ಇವೆ, ಮನೆಯ ಸಮಸ್ಯೆಗಳನ್ನು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುದು, ಮತ್ತು ಎಲ್ಲರೂ ಒಪ್ಪುವರು. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿದ್ದರೂ ಸಹ, ನಿಮ್ಮ ಹೊಟ್ಟೆಯು ಇಂದು ನಿಮ್ಮ ದುರ್ಬಲ ತಾಣವಾಗಿದೆ, ಆದ್ದರಿಂದ ನೀವು ಮದ್ಯಪಾನ ಮಾಡಲು ಅಥವಾ ಕೊಬ್ಬಿನ ಆಹಾರವನ್ನು ಸೇವಿಸಲು ನಿರ್ಧರಿಸಿದರೆ, ಮಿತವಾಗಿರಿ.
ಶ್ರೀ ವಿಷ್ಣು ಸಂಬಂಧಿಂತ ದೇವಸ್ಥಾನಕ್ಕೆ ಹೋಗಿ.

ವೃಶ್ಚಿಕ ರಾಶಿ
ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಂದು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರಿಗೆ ಫೋನ್‌ ಮಾಡಿ ಮಾತುಕತೆ ನಡೆಸಿ. ಕೆಲಸದಲ್ಲಿ ನಿರತರಾಗಿರುವ ಜನರು ಇಂದು ತಮ್ಮ ಸಹೋದ್ಯೋಗಿಗಳೊಂದಿಗೆ ಇರಬೇಕಾಗುತ್ತದೆ, ನೀವು ಇಂದು ಯಾರಿಗಾದರೂ ಹಣವನ್ನು ಸಾಲ ನೀಡಬೇಕಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.
ಈ ದಿನ ಶ್ರೀ ಮಂಜುನಾಥ ಸ್ವಾಮಿಯನ್ನು ಪೂಜಿಸಿ ಶುಭವಾಗುವುದು

ಧನುಸ್ಸು ರಾಶಿ
ಬಹುದಿನದ ನಿರೀಕ್ಷೆ ಕನಸು ಇಂದು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ, ಉನ್ನತ ಅಧಿಕಾರವನ್ನು ಹೊಂದುವ ನಿಮ್ಮ ಆಸೆಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಇನ್ನು ಒಳಿತಾಗುವುದು. ಸಾಲ ನೀಡಲು ಇದು ಉತ್ತಮ ಸಮಯವಲ್ಲ. ಕೆಲಸದ ಸ್ಥಳದಲ್ಲಿ ವಿಷಯಗಳು ಸುಧಾರಿಸುತ್ತಿವೆ, ತಾಳ್ಮೆಯಿಂದಿರಿ. ನೀವು ಸ್ವಲ್ಪ ಸಮಯದಿಂದ ನೋಡುತ್ತಿರುವ ವಿಚಾರಗಳನ್ನು ಕೇಳಲು ಅಥವಾ ಅಭಿವೃದ್ಧಿಗೊಳಿಸಲು ಇದು ಉತ್ತಮ ಸಮಯವಾಗಿದೆ.
ಇಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.

ಮಕರ ರಾಶಿ
ನಿರಾಶೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇದೆ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ನೀವು ನಿಮ್ಮಂತೆ ಅನಿರ್ದಿಷ್ಟರಾಗಿರಬಾರದು. ಈ ಕ್ಷಣದಲ್ಲಿ ಯಾವುದು ಸರಿ ಎನಿಸುತ್ತದೆಯೋ ಅದರೊಂದಿಗೆ ನಿಮ್ಮ ಅವಕಾಶಗಳನ್ನು ಪಡೆದುಕೊಳ್ಳಿ ಮತ್ತು ಇತರರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ಚಿಂತಿಸಬೇಡಿ!
ಶಿವರಾದನೆಯನ್ನು ಮಾಡಿ ಶುಭವಾಗುವುದು

ಕುಂಭ ರಾಶಿ
ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಭಾವನಾತ್ಮಕ ಬೆಂಬಲಕ್ಕಾಗಿ ನಿಮ್ಮ ಸ್ನೇಹಿತರನ್ನು ಕೇಳಲು ಭಯಪಡಬೇಡಿ. ನೀವು ಅವರಿಗಾಗಿ ಇದ್ದೀರಿ, ಅವರು ನಿಮಗಾಗಿ ಇದ್ದಾರೆ.
ಶ್ರೀ ಹನುಮಾನ್ ಚಾಲೀಸಾ ಪಠಿಸಿ ಶುಭವಾಗುವುದು,

ಮೀನ ರಾಶಿ
ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಸಂಪಾದಿಸುವಿರಿ, ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ ಅವರನ್ನು ನಿರ್ಲಕ್ಷಿಸಿ. ಇಂದು ನೀವು ನಿಮ್ಮ ಕನಸುಗಳ ಕೆಲಸವನ್ನು ಮಾಡಬಹುದು. ಸಾಮಾನ್ಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮಲಗಲು ಪ್ರಯತ್ನಿಸಿ.
ಶ್ರೀ ಕಾಲಭೈರವ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ.

🪀 8500 33 3435
ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

Leave a Reply

Your email address will not be published. Required fields are marked *