15-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಕುಟುಂಬದಲ್ಲಿ ಕಲಹಗಳ ಸಾಧ್ಯತೆ, ಇಂದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ, ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ, ಅದರಿಂದ ನೀವು ನಷ್ಟವನ್ನು ಭರಿಸಬೇಕಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಜನರೊಂದಿಗೆ ಉತ್ತಮ ವ್ಯವಹಾರ ನಡೆಸಿ ಹಾಗು ಸರಳ ಸುಖ ಜೀವನ ನಡೆಸಿ.
ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ವೃಷಭರಾಶಿ
ಅಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲು ಸೂಕ್ತವಾದ ದಿನವಾಗಿದೆ. ನಿಮ್ಮ ಮನಸ್ಸಿನ ತಾಕಲಾಟಕ್ಕೆ ಅಧ್ಯಾತ್ಮದ ಓದು ಪರಿಹಾರ ಸೂಚಿಸಬಲ್ಲದು. ಆದಷ್ಟು ಮೌನವನ್ನು ಆಚರಿಸುವುದು ಒಳ್ಳೆಯದು. ಸಾಮಾಜಿಕ ಜೀವನವು ಇಂದು ಸುಖಮಯವಾಗಿರುವುದು ಜನರು ನಿಮ್ಮ ಇಂದು ನಿಮ್ಮ ಸೇವೆಯನ್ನು ಬಯಸುವರು, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಇಂದು ಜಾಗರೂಕರಾಗಿರಬೇಕು.
ಶ್ರೀ ಸಾಯಿಬಾಬಾರ ದರ್ಶನ ಮಾಡಿ.

ಮಿಥುನ ರಾಶಿ
ನಿಮ್ಮದೇ ಅದ ವಿಶೇಷ ಆಲೋಚನೆಗಳು ನಿಮಗೆ ಧನಲಾಭ ವಿಚಾರದಲ್ಲಿ ಬೆಂಬಲಿಸಬಲ್ಲವು. ನಿಮ್ಮ ಆತ್ಮೀಯ ಗೆಳೆಯರು ಇಲ್ಲವೆ ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು. ಹಣದ ವಿಷಯದಲ್ಲಿ, ನೀವು ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಂಗೀತ ಮತ್ತು ಚಿತ್ರಕಲೆಗಾರರಿಗೆ ವಿಶೇಷ ಅನುಕೂಲವಾಗಿದೆ ಮತ್ತು ಲಾಭದಾಯಕವಾಗಿದೆ.
ಶ್ರೀ ದುರ್ಗಾಸ್ತೋತ್ರವನ್ನು ಪಠಿಸಿ, ಶುಭವಾಗುವುದು,

ಕಟಕ ರಾಶಿ
ಮನೆಯಿಂದ ಹೊರಹೋಗುವಾಗ ನಿತ್ಯ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ನೀವು ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಂದು ಕಳೆದುಕೊಳ್ಳಬಹುದು. ಕುಟುಂಬದಲ್ಲಿ ನೀವು ಯಾವುದೇ ನಿರ್ಧಾರವನ್ನು ಶಾಂತವಾಗಿ ತೆಗೆದುಕೊಳ್ಳಬೇಕು. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣದಲ್ಲಿ ಎಚ್ಚರದಿಂದ ಇರಿ.
ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಿ.
ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ.

ಸಿಂಹ ರಾಶಿ
ಏಕಾಂತಮಯವಾದ ಸ್ಥಳವನ್ನು ಬಯಸಿ ಹೋಗಲು ಪ್ರಯತ್ನಿಸುವಿರಿ. ಆದರೆ ಒಂಟಿತನವೂ ಬೇಸರವನ್ನುಂಟು ಮಾಡುವುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಇಲ್ಲವೆ ಬಂಧುಗಳ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ., ವ್ಯಾಪಾರ ಮಾಡುವ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ
ಶ್ರೀ ಹನುಮ ದೇವರ ಸ್ಮರಣೆ ಮಾಡಿ.

ಕನ್ಯಾ ರಾಶಿ
ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇರುವುದು. ಉದ್ಯೋಗದಲ್ಲಿ ಉನ್ನತಿಗೆ ಸಂಬಂದಿಸಿದ ಶುಭ ಸಮಾಚಾರವನ್ನು ಪಡೆಯುವಿರಿ, ನಿಮ್ಮ ಎಲ್ಲಾ ಕೆಲಸಗಳಿಂದ ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ನಿಮ್ಮ ಸ್ನೇಹಿತರೊಬ್ಬರು ಇಂದು ದೊಡ್ಡ ಮೊತ್ತದ ಧನ ಸಹಾಯವನ್ನು ಕೇಳಬಹುದು.
ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ತುಲಾ ರಾಶಿ
ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು. ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗುವುವು, ಇಂದು ನೀವು ವ್ಯಾಪಾರ ವ್ಯವಹಾರದಲ್ಲಿ ಕೆಲವು ಸವಾಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತೀರಿ. ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ.
ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ.

ವೃಶ್ಚಿಕ ರಾಶಿ
ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಪಡೆಯುವ ನಿಮ್ಮ ಕೆಲಸವೊಂದು ಈ ದಿನ ಕೈಗೂಡಲಿದೆ. ಸಕಾರಾತ್ಮಕವಾದ ಪ್ರಸಿದ್ಧಿಗೆ ದಾರಿ ಸುಗಮವಾಗಲಿದೆ. ಇದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತ ಅವಕಾಶ ಕೂಡಿಬರಬಹುದು. ವಿವಿಧ ಮೂಲಗಳಿಂದ ಹಣ ಬರುವುದು. ನಿಮಗಿಂತ ಹೆಚ್ಚಾಗಿ ಇತರರ ಕೆಲಸಗಳತ್ತ ಗಮನ ಹರಿಸುವುದರಿಂದ ನೀವು ತೊಂದರೆಗೆ ಈ ದಿನ ಸಿಲುಕಬಹುದು.
ನವಗ್ರಹ ಪ್ರದಕ್ಷಿಣೆ ಮಾಡಿ, ದಕ್ಷಿಣ ಸಮೇತ ಕಡಲೆ ಕಾಳನ್ನು ದಾನ ಮಾಡಿ.

ಧನುಸ್ಸು ರಾಶಿ
ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಸಿಗಬಹುದು. ಇದರಿಂದ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುವು. ಬೇರೆಯವರೊಂದಿಗೆ ನಿಮ್ಮ ಕೆಲಸಗಳನ್ನು ಅಂತಿಮಗೊಳಿಸುವಾಗ ಅವರು ನಿಮ್ಮನ್ನು ಕೆಲವು ಸಮಸ್ಯೆಗೆ ಸಿಲುಕಿಸಬಹುದು. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆಯಿದೆ ಜಾಗ್ರತೆ ವಹಿಸಿ.
ನಿಮ್ಮ ಕುಲದೇವರ ಪ್ರಾರ್ಥನೆಯಿಂದ ಒಳಿತಾಗುವುದು.

ಮಕರ ರಾಶಿ
ನಿಮ್ಮ ಒಳಮನಸ್ಸಿನ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವುವು. ಈ ಬಗ್ಗೆ ಯೋಚಿಸಿ ಹೆಜ್ಜೆಯನ್ನಿಡಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಒಡಹುಟ್ಟಿದವರೊಂದಿಗೆ ಯಾವುದೇ ಜಗಳವಾಡುವುದನ್ನು ನೀವು ಇಂದು ತಪ್ಪಿಸಬೇಕು. ಇಂದು ನೀವು ಧಾರ್ಮಿಕ ಸ್ಥಳಕ್ಕೆ ಅಥವಾ ಬಂದುಮಿತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಶ್ರೀ ದುರ್ಗಾಪರಮೇಶ್ವರಿಯನ್ನು ಭಕ್ತಿಯಿಂದ ಪೂಜಿಸಿ.

ಕುಂಭ ರಾಶಿ
ಉತ್ತಮ ವಿಚಾರವಾಗಿ ನೀವು ಒಳ್ಳೆಯ ನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವಿರಿ. ನೀವಾಡುವ ಮಾತುಗಳಿಂದ ಅವರು ಪ್ರಭಾವಿತರಾಗಿ ನಿಮಗೆ ಸಹಾಯ ನೀಡುವರು ಮಕ್ಕಳ ಆಟಪಾಠಗಳಿಂದ ಸಂತೋಷ ಹೊಂದುವಿರಿ. ಕೆಲವು ನಿಮ್ಮ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವಲ್ಲಿ
ನಿಮ್ಮ ಸ್ನೇಹಿತರ ಸಹಕಾರದಿಂದ ಪೂರ್ಣಗೊಳ್ಳುತ್ತದೆ.
ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ.

ಮೀನ ರಾಶಿ
ಉತ್ತಮ ಸಮಾಜದ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹ ಹಸ್ತಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗುವುವು ಮತ್ತು ನೀವು ಯಾವುದೇ ಈ ಹಿಂದೆ ಹೂಡಿಕೆಯನ್ನು ಮಾಡಿದ್ದರೆ, ಅದರಲ್ಲಿ ನಿಮಗೆ ಲಾಭವಾಗುವುದು. ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆಯ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ.
ಸಾಯಿ ಬಾಬಾರ ದೇವಾಲಯದಲ್ಲಿ ಸಿಹಿ ಹಂಚಿ.

🪀 8500 33 3435
ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q