Change your cover photo
Upload
ಶ್ರೀ ಸುದರ್ಶನ್ ಹೆಚ್.ಪಿ. ರವರು ಬೆಂಗಳೂರಿನ ನಿವಾಸಿಗಳಾಗಿದ್ದು, ಹುಟ್ಟಿ ಬೆಳೆದಿದ್ದು ತುಮಕೂರಿನಲ್ಲಿ. ಇಂಜಿನಿಯರಿಂಗ್ ಪದವಿಯನ್ನು ತುಮಕೂರಿನ SIT ಕಾಲೇಜಿನಿಂದ ಪೂರ್ಣಗೊಳಿಸಿರುವ ಇವರು, ಬೆಂಗಳೂರಿನ ಪ್ರತಿಷ್ಠಿತ MNC ಸಂಸ್ಥೆಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಂಪ್ರದಾಯಿಕ ಮತ್ತು ಜ್ಯೋತಿಷ್ಯ ಪರಂಪರೆ ಹೊಂದಿರುವ ಕುಟುಂಬದಿಂದ ಬಂದ ಇವರಿಗೆ, ಚಿಕ್ಕವಯಸ್ಸಿನಿಂದಲೂ ತುಮಕೂರಿನ ರಾಮಕೃಷ್ಣ ಆಶ್ರಮದೊಂದಿಗೆ ನಿಕಟ ಒಡನಾಟವಿತ್ತು. ಇವರ ತಂದೆ ಹಾಗೂ ತಾತ ಇಬ್ಬರೂ ಪ್ರಸಿದ್ಧ ಜ್ಯೋತಿಷಿಗಳಾಗಿದ್ದು, ಇವೆಲ್ಲದರ ಪ್ರಭಾವದಿಂದ ಬಾಲ್ಯದಿಂದಲೇ ವೇದಾಧ್ಯಯನ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರಗಳ ಬಗ್ಗೆ ವಿಶೇಷ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಆಳವಾದ ಅಧ್ಯಯನ ನಡೆಸಿ, ಆಚಾರ್ಯ ಶ್ರೀ ಗುರುಪ್ರಕಾಶ್ ಗುರೂಜಿಯವರ ಮಾರ್ಗದರ್ಶನದಲ್ಲಿ ಮೈ ಆಚಾರ್ಯ ಸಂಸ್ಥೆಯ Sri Guru Institute of Astrology ಇಂದ ಜ್ಯೋತಿಷ್ಯ ಪ್ರವೀಣ, ಜ್ಯೋತಿಷ್ಯ ವಿಶಾರದ, ಜ್ಯೋತಿಷ್ಯ ವಿದ್ವತ್, ವಾಸ್ತು ಪ್ರವೀಣ ಹಾಗೂ ಸಂಖ್ಯಾ ಶಾಸ್ತ್ರಜ್ಞ ಪದವಿಗಳನ್ನು ಪಡೆದಿದ್ದಾರೆ. ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರಂತರ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.
ಜೊತೆಗೆ, ಮೈ ಆಚಾರ್ಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮುಹೂರ್ತ, ಸಾಲಾವಳಿ ಹಾಗೂ ಜ್ಯೋತಿಷ್ಯ ಶಾಸ್ತ್ರದ ಇತರ ಪ್ರಮುಖ ವಿಷಯಗಳನ್ನು ಬೋಧಿಸುವ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳಿಗೆ ಶ್ಲೋಕಗಳನ್ನೂ ಧಾರ್ಮಿಕ ವಿಚಾರಗಳನ್ನೂ ಬೋಧಿಸುವ ಮೂಲಕ ನಮ್ಮ ಸನಾತನ ಧರ್ಮವನ್ನು ಉಳಿಸುವ ಮತ್ತು ಬೆಳೆಸುವತ್ತ ತಮ್ಮ ಕಿರು ಕಾಣಿಕೆಯನ್ನು ನೀಡುತ್ತಿದ್ದಾರೆ.
ಕನ್ನಡ ಸಾಹಿತ್ಯ, ಭಾಷೆ ಮತ್ತು ನಡೆ-ನುಡಿಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಇವರಿಗೆ ಕನ್ನಡ ಕವನಗಳನ್ನು ಬರೆಯುವುದು ಮತ್ತು ಚಿಕ್ಕ ಮಕ್ಕಳಿಗೆ ಕನ್ನಡದಲ್ಲಿ ಕಥೆಗಳನ್ನು ಹೇಳುವುದು ನೆಚ್ಚಿನ ಹವ್ಯಾಸ.
This user account status is Approved
This user has not made any comments.