Today's Panchang
September 30, 2026
22-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ
Daily Horoscope

22-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ

Sep 21, 2026

https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ಬುದ್ಧಿವಂತರಾದ ನಿಮಗೆ ಮೋಸ ಮಾಡುವ ವ್ಯಕ್ತಿ ಎದುರಾಗಬಹುದು. ಅವಸರ ಮಾಡದೆ ಇದ್ದಲ್ಲಿ ಕಾರ್ಯ ಸಾಫಲ್ಯವನ್ನು ಹೊಂದುವುದು. ನೀವಾಡುವ ಮಾತು ಇನ್ನೊಬ್ಬರ ಮನಸ್ಸನ್ನು ನೋಯಿಸದಿರಲಿ. ಈ ಬಗ್ಗೆ ಎಚ್ಚರ ವಹಿಸಿ. ಕೇವಲ ಯೋಚನೆಗಳಲ್ಲೇ ಮುಳುಗಿರಬೇಡಿ. ಅದರಿಂದ ಹೊರಕ್ಕೆ ಬನ್ನಿ. ನಂಬಿಕಸ್ಥರು ಲಾಭದ ದಾರಿ ತೋರುವರು. ಮಕ್ಕಳು ಮಾಡುವ ಅಚಾತುರ್ಯಕ್ಕೆ ನೀವು ಬೆಲೆ ತೆರಬೇಕಾಗುವುದು.
ಶ್ರೀ ಆಂಜನೇಯ ಸ್ವಾಮಿ ಜಪವನ್ನು ಮಾಡಿ.

ವೃಷಭರಾಶಿ
ಹಳೆಯ ವಿವಾದಕ್ಕೆ ತೆರೆ ಬೀಳಲಿದೆ. ಆದಷ್ಟು ತಾಳ್ಮೆಯಿಂದ ಇರಿ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯಗತ್ಯ. ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು. ದೈಹಿಕ ಆರೋಗ್ಯ ಕೂಡಾ ಅಷ್ಟೆ ಪ್ರಮುಖವಾದುದು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು.
ಶಿವಪಂಚಾಕ್ಷರಿ ಮಂತ್ರ ಜಪಿಸಿ.

ಮಿಥುನ ರಾಶಿ
ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ.
ಸೂರ್ಯಾರಾಧನೆಯನ್ನು ಮಾಡಿ ಶುಭವಾಗುವುದು.

ಕಟಕ ರಾಶಿ
ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಜನರು ಕೊಂಡಾಡುವರು. ಅಪೂರ್ಣವಾಗಿರುವ ಕೆಲಸಗಳನ್ನು ಬೇಗ ಮಾಡಿ ಮುಗಿಸಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು.
ಶ್ರೀ ದತ್ತಾತ್ರೇಯ ಸ್ವಾಮಿಯನ್ನು ಸ್ಮರಣೆ ಮಾಡಿ ಶುಭವಾಗುವುದು.

ಸಿಂಹ ರಾಶಿ
ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು. ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ. ಕುಟುಂಬದವರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುವಿರಿ, ಅನಿರೀಕ್ಷಿತ ದನಲಾಭವಾಗುವುದು.
ದೇವಾಲಯಕ್ಕೆ ಎಳ್ಳು ದಾನ ಮಾಡಿ.

ಕನ್ಯಾ ರಾಶಿ
ಬಿರುಬಿಸಿಲಿನ ಬಾಧೆಗೆ ಬಳಲಿದಂತೆ, ಗ್ರಹಗಳ ಅಶುಭಫಲ ಸಂಚಾರದಿಂದ ಬಳಲುವಿರಿ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನಲ್ಲಿ ಮೊರೆ ಹೋಗಿ. ನಿಮ್ಮ ಕಾರ್ಯಗಳಲ್ಲಿ ಅಲ್ಪ ಗೆಲುವು ಕಂಡುಬರುವುದು. ವಿಜಯದ ಯೋಜನೆಗಾಗಿ ಕಾರ್ಯಶೀಲರಾಗಿ. ಉತ್ತಮ ಸಹವರ್ತಿಗಳು ನಿಮ್ಮನ್ನು ಸಂಧಿಸುತ್ತಾರೆ. ನೀವು ಮಾಡಿದ ಸಂಶೋಧನಾ ಕೆಲಸಕ್ಕೆ ಶೀಘ್ರವೇ ಮನ್ನಣೆ ದೊರೆಯುವುದು. ಇದರಿಂದ ನಿಮ್ಮ ಮುಂದಿನ ದಾರಿ ಸುಗಮವಾಗುವುದು.
ಶ್ರೀ ಸೋಮೇಶ್ವರ ಸ್ವಾಮಿಯನ್ನು ಸ್ಮರಿಸಿ.

ತುಲಾ ರಾಶಿ
ಸಂಸಾರವು ಸುಖಮಯವಾಗಿರುವುದು. ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ನಿಮ್ಮನ್ನು ರೋಮಾಂಚನಗೊಳಿಸಬಹುದು. ನಿಮ್ಮ ಮುಂಗೋಪದ ವಿಚಾರವಾಗಿ ಸಂಗಾತಿಯಿಂದ ಅಸಹಕಾರ ಬರುವ ಸಾಧ್ಯತೆ ಇದೆ. ಹಾಗಾಗಿ ಸಂಗಾತಿಯ ಇಷ್ಟಾನಿಷ್ಟಗಳ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ತೊಂದರೆ ಇರುವುದಿಲ್ಲ.
ಶ್ರೀ ಗಂಧದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ.

ವೃಶ್ಚಿಕ ರಾಶಿ
ಇದುವರೆಗೂ ಅನುಭವಿಸಿದ ಸಂಕಟಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಈ ದಿನ ಹೊಸ ಉತ್ಸಾಹ ನೆಮ್ಮದಿ ಮೂಡುವುದು. ಬಂಧುಗಳಿಂದ ಮತ್ತು ಮಿತ್ರರಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಮಾತುಗಳು ನಿಮ್ಮನ್ನು ಗೆಲ್ಲಿಸಲಿವೆ. ಜನರ ನಡುವೆ ಗುರುತಿಸಿಕೊಳ್ಳುವಿರಿ. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.
ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ. ಸಂಜೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ.

ಧನುಸ್ಸು ರಾಶಿ
ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಹಣದ ಪರದಾಟ ತಪ್ಪುವ ಯೋಜನೆಗಳನ್ನು ನಿಮ್ಮ ದೈವ ರೂಪಿಸುತ್ತದೆ. ಆದರೆ ಅದಕ್ಕಾಗಿ ಅವಸರ ಪಡಬೇಡಿ. ಬರುವ ಹಣಕಾಸಿನಲ್ಲಿ ಉಳಿತಾಯ ಮಾಡಿ. ಸಾಲ ತೀರಿಸುವ ಬಗ್ಗೆ ಗಮನ ನೀಡಿ.
ಶ್ರೀ ಅನ್ನಪೂರ್ಣೇಶ್ವರಿಯನ್ನು ಸ್ಮರಿಸುತ್ತ ಅನಾಥರಿಗೆ ಅನ್ನದಾನ ಮಾಡಿ.

ಮಕರ ರಾಶಿ
ಮಿತ್ರರ ಜೊತೆ ಭೂರಿ ಭೋಜನ ಸವಿಯುವ ಭಾಗ್ಯ ನಿಮ್ಮದಾಗುವುದು. ಮತ್ತು ಸ್ನೇಹಿತರಿಂದ ಉತ್ತಮ ಸಲಹೆಗಳು ಕೇಳಿಬರುವುವು. ಅವನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು. ನಿಮ್ಮ ಸೌಮ್ಯ ನಡವಳಿಕೆಯ ಪರಿಣಾಮದಿಂದ ಉತ್ತಮ ಫಲವನ್ನು ಹೊಂದುವಿರಿ. ಕೆಲಸದಲ್ಲಿ ಬಡ್ತಿ ದೊರೆಯುವುದು. ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ತರುವುದು.
ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ.

ಕುಂಭ ರಾಶಿ
ವಿವಾಹ ಯೋಗ್ಯರಿಗೆ ಕಂಕಣಭಾಗ್ಯದ ವಿವಾಹದ ಮಾತುಕತೆಗಳು ಫಲಪ್ರದವಾಗುವುವು. ಆರ್ಥಿಕ ವಿಷಯದಲ್ಲಿ ಚೇತರಿಕೆ ಕಂಡುಬರುವುದು. ನಿಮ್ಮ ಮನಸ್ಸಿನ ಸ್ಥಿತಿಯಂತೆ ಕಾರ್ಯ ಕೈಗೂಡುವುದರಿಂದ ಒಳಿತಾಗುವುದು. ರಾಜಕಾರಣಿಗಳಿಗೆ ವಿರೋಧಿಗಳಿಂದ ತೊಂದರೆ ಇದೆ. ಧನಲಾಭದ ವಿಷಯದಲ್ಲಿ ದೈವ ನಿಮಗೆ ಸಹಕರಿಸಲಿದೆ. ಆದರೆ ಮನೆಯಲ್ಲಿ ಸಂಗಾತಿಯ ಹುಸುಕೋಪಕ್ಕೆ ಗುರಿ ಆಗುವಿರಿ.
ಕುಲದೇವರನ್ನು ಪ್ರಾರ್ಥನೆ ಮಾಡಿ.

ಮೀನ ರಾಶಿ
ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ.
ತಾಯಿ ದುರ್ಗಾಮಾತೆಯನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ಒಳಿತಾಗುವುದು.

ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

Leave a Reply

Your email address will not be published. Required fields are marked *