Today's Panchang
November 27, 2026
20-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
Daily Horoscope

20-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ

Nov 19, 2026

ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ (Aries)
ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ -ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಲುಕಿಕೊಳ್ಳಬಹುದು. ಈ ದಿನ ಅಧಿಕ ಹಣಕಾಸಿನ ವ್ಯಯವಾಗುತ್ತದೆ, ಅದರಲ್ಲೂ ಆಸ್ಪತ್ರೆಗೆ ಸಂಬಂದಿಸಿದ ವಿಚಾರದಲ್ಲಿ ಅಧಿಕ ಹಣ ವ್ಯಯವಾಗಬಹುದು, ಆಡಂಭರದ ಜೀವನಕಕ್ಕಾಗಿ ಈ ದಿನ ಹಣ ಖರ್ಚು ಮಾಡುತ್ತೀರಿ.
ಈಶ್ವರನ ದರ್ಶನ ಮಾಡುವದರಿಂದ ಶುಭ ಫಲ ಪಡೆಯಬಹುದು.

ವೃಷಭರಾಶಿ (Taurus)
ಅನಿಯಮಿತ ಆಹಾರ ಪದ್ಧತಿ ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಆ ಕಾರಣಕ್ಕಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ವಾಹನ ಖರೀದಿಸಲು ಆಲೋಚನೆ ಮಾಡುತ್ತೀರಿ. ಅನಿರೀಕ್ಷಿತ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಶ್ರೀ ಆಂಜೆನೇಯ ಸ್ವಾಮಿಗೆ ಪ್ರಾರ್ಥನೆ ಮಾಡಿ ಶುಭವಾಗುವುದು.

ಮಿಥುನ ರಾಶಿ (Gemini)
ಈ ದಿನ ನಿಮ್ಮ ಆಪ್ತ ವಲಯ ಅಥವಾ ಕುಟುಂಬದಲ್ಲಿ ದೂರ ಪ್ರಯಾಣ ಅಥವಾ ವಿದೇಶ ಪ್ರವಾಶದ ಬಗ್ಗೆ ಚರ್ಚೆ ನೆಡೆಯುತ್ತದೆ, ನಿಮ್ಮ ಈ ದಿನದ ಲಾಭವನ್ನು ಅನಿರೀಕ್ಷಿತ ದುಂದು ವೆಚ್ಚ ಮಾಡುವ ಸಾಧ್ಯತೆಗಳು ಇವೆ. ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ವಿಷ್ಟು ಸಹಸ್ರನಾಮ ಪಠಣದಿಂದ ಶುಭಫಲ

ಕಟಕ ರಾಶಿ (Cancer)
ಮಾತಿನ ಮೇಲೆ ಹಿಡಿತವಿರಲಿ. ಸಂಬಂಧಿಕರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ನಿರ್ಧಾರಗಳ ತೆಗೆದುಕೊಳ್ಳಲು ಇದು ಸಕಾಲವಲ್ಲ. ಮಕ್ಕಳು ಹಾಗೂ ಕುಟುಂಬ ಸದಸ್ಯರಿಗೆ ನಿಮ್ಮ ಸಮಯ ನೀಡಿ. ಇಂದು ನಿಮ್ಮ ಹಣ-ಸಂಬಂಧಿತ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಮತ್ತು ಹೊಸ ಆದಾಯದ ಮೂಲಗಳು ಗೋಚರಿಸುತ್ತವೆ.
ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ.

ಸಿಂಹ ರಾಶಿ (Leo)
ಹಿರಿಯರಿಗೆ ಗೌರವ ಕೊಡುವುದು ಈ ದಿನ ನಿಮ್ಮ ಗಮನದಲ್ಲಿ ಇರಬೇಕು, ತಂದೆಯ ಆರೋಗ್ಯದ ಕಡೆ ಗಮನವಿರಲಿ ,ವ್ಯಾಪಾರ ವ್ಯಾವಹಾರ ಮಾಡುವವರಿಗೆ ಈ ದಿನ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿರ, ಈ ದಿನ ಧನಲಾಭವಾಗುವ ಸಾಧ್ಯತೆ ಕಂಡು ಬರುತ್ತಿದೆ. ಮನ ಬಂದಂತೆ ಖರ್ಚಿಗೆ ದಾರಿ ಮಾಡಿಕೊಳ್ಳದಿರಿ. ಈ ದಿನ ನಿಮಗೆ ದೇವತಾ ಅನುಗ್ರಹವಿದೆ.
ಗುರುಗಳ ಸೇವೆಯನ್ನು ಮಾಡುವದರಿಂದ ಇನ್ನು ಶುಭ ಫಲವನ್ನು ಪಡೆಯಬಹುದು.

ಕನ್ಯಾ ರಾಶಿ (Virgo)
ಆರ್ಥಿಕ ಹಾಗು ವ್ಯಾವಹಾರಿಕ ದೃಷ್ಟಿಯಿಂದ ಈ ದಿನವು ಅಶುಭ. ನಿರ್ಣಾಯಕ ಕ್ರಮಗಳನ್ನು ಇಂದು ತೆಗೆದುಕೊಳ್ಳದಿರಿ. ಈ ದಿನ ನೀವು ಮೋಸ ಹೋಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯ ವ್ಯವಹಾರಗಳು ನಷ್ಟವನ್ನು ಅನುಭವಿಸಬಲ್ಲವು. ಹಣ ಕಾಸಿನ ವ್ಯವಹಾರದಲ್ಲಿ ಜಾಗ್ರತೆ ವಹಿಸಿ.
ದೇವಸ್ಥಾನಕ್ಕೆ ಎಳ್ಳು ಎಣ್ಣೆಯನ್ನು ದಾನ ಮಾಡುವದರಿಂದ ಶುಭ ಫಲ ಸಿಗುವುದು.

ತುಲಾ ರಾಶಿ (Libra)
ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ. ಈ ದಿನ ತಾವು ಸುಖಕರ ಪ್ರಯಾಣವನ್ನು ಮಾಡುವಿರಿ, ಸಾಧ್ಯವಾದಷ್ಟು ಬಡಜನರಿಗೆ ಸಹಾಯ ಮಾಡಿ, ನೀವು ಈ ದಿನ ಮಾಡುವ ಸತ್ಕಾರ್ಯಗಳಿಂದ ನಿಮ್ಮ ಜೀವನವು ಸುಖಮಯವಾಗುವುದು, ತೊರ್ಪಡಿಕೆಕೊಸ್ಕರ ಹಣವನ್ನು ಖರ್ಚು ಮಾಡುವ ಸಾಧ್ಯತೆಗಳು ಇವೆ,
ನವಗ್ರಹ ಪ್ರದಕ್ಷಣೆಯಿಂದ ಶುಭ ಫಲ ಪಡೆಯುವಿರಿ.

ವೃಶ್ಚಿಕ ರಾಶಿ (Scorpio)
ನಿಮ್ಮ ಸಹೋದರ ಮತ್ತು ಸ್ನೇಹಿತನ ಬೆಂಬಲವು ಲಾಭ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಹಲವಾರು ಸಾಧನೆಗಳನ್ನು ಮಾಡುವ ಸಾಧ್ಯತೆಯಿದೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮ್ಮನ್ನು ಸಂಪೂರ್ಣವಾಗಿ ದಣಿಸುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಘರ್ಷಣೆಯನ್ನು ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ.. ಕುಟುಂಬದ ಜೊತೆ ಈ ದಿನ ಹೆಚ್ಚು ಸಮಯ ಕಳಿಯುವುದು ಉತ್ತಮ.
ಮನೆ ದೇವರ ಪ್ರಾರ್ಥನೆ ಹಾಗು ದರ್ಶನದಿಂದ ಶುಭ ಫಲ.

ಧನುಸ್ಸು ರಾಶಿ (Sagittarius)
ಮಂಗಳನ ಪ್ರಭಾವ ನಿಮ್ಮ ರಾಶಿಯ ಮೇಲಿದ್ದು, ಕೌಂಟುಬಿಕ ವ್ಯವಹಾರಗಳು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಕಠಿಣ ಪರಿಶ್ರಮದ ಮೂಲಕ ವೃತ್ತಿಪರ ವಿಚಾರಗಳಲ್ಲಿ ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ. ಕೆಲಸದ ಕಡೆ ಹೆಚ್ಚು ಗಮನ ಹರಿಸುವುದು ಉತ್ತಮ. ಸಾಲದ ವಿಚಾರದಲ್ಲಿ ಜಾಗುರೂಕರಾಗಿರಿ. ಸಾಲ ಪಡೆಯುವುದು ಮತ್ತು ಮಾಡುವುದು ಬೇಡ.
ಶ್ರೀ ಸೂರ್ಯ ದೇವರ ಪ್ರಾರ್ಥನೆಯಿಂದ ಶುಭ ಫಲ.

ಮಕರ ರಾಶಿ (Capricorn)
ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಅದರಲ್ಲಿ ಹಣವನ್ನು ಸಹ ಖರ್ಚು ಮಾಡಬಹುದು. ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡಗಳಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಿ.
ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ

ಕುಂಭ ರಾಶಿ (Aquarius)
ಹಣಕಾಸಿನ ವಿಚಾರದಲ್ಲಿ ಆಶಾವಾದಿಗಳಾಗಿರಿ ಇದು ದೀರ್ಘ-ಯೋಜಿತ ಉದ್ಯಮದಲ್ಲಿ ಪಾಲುದಾರರೊಂದಿಗೆ ಸೇರಿಕೊಳ್ಳಲು ಇದು ಉಪಯುಕ್ತವಾಗಬಹುದು. ಸಾಮಾಜಿಕವಾಗಿ ಒತ್ತಡಗಳು ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರ ಉತ್ತಮವಾಗಿರಲಿವೆ. ಗೆಳಯರ ಸಹಕಾರ ಪಡೆಯಿರಿ ಪ್ರೀತಿಪಾತ್ರರ ಮೇಲೆ ಅನುಮಾನ ಬೇಡ.
ನಿಮ್ಮ ಗ್ರಾಮ ದೇವತಾ ದರ್ಶನ ಅಥವಾ ಪ್ರಾರ್ಥನೆ ಮಾಡಿ.

ಮೀನ ರಾಶಿ (Pisces)
ಈ ದಿನ ಯಾವುದಾದರು ಒಂದು ಕ್ಷೇತ್ರ ದರ್ಶನ ಮಾಡುವಿರಿ, ಕುಟುಂಬದ ವಿಚಾರಗಳಿಗೆ ಸಮಯವನ್ನು ಕೊಡುತ್ತೀರಾ ಹಾಗು ಕುಟುಂಬದ ವಿಚಾರಗಳಿಗೆ ಹಣ ಖರ್ಚು ಮಾಡುತ್ತೀರಾ, ಕೆಲಸದ ಒತ್ತಡದಿಂದ ಮೈಕೈ ನೋವು ಬರುವ ಸಾಧ್ಯತೆ ಇದೆ. ಬಂಧುಗಳು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಸ್ನೇಹಿತರು ಮತ್ತು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸಬೇಡಿ.
ದುರ್ಗಾ ದೇವಿ ಪ್ರಾರ್ಥನೆಯಿಂದ ಶುಭವಾಗುವುದು

ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

🙏 ಸೂಚನೆ: ಈ ರಾಶಿಭವಿಷ್ಯವು ಸಾಮಾನ್ಯ ರಾಶಿ ಆಧಾರಿತ ಜ್ಯೋತಿಷ್ಯ ವಿವರಣೆಯಾಗಿದೆ. ವೈಯಕ್ತಿಕ ಜಾತಕ, ದಶಾ ಮತ್ತು ಗ್ರಹಸ್ಥಿತಿಗಳ ಆಧಾರದ ಮೇಲೆ ಫಲಗಳಲ್ಲಿ ವ್ಯತ್ಯಾಸವಿರಬಹುದು.

ಪ್ರತಿದಿನದ ರಾಶಿ ಭವಿಷ್ಯ, ಜ್ಯೋತಿಷ್ಯ ಮಾಹಿತಿ, ಆಧ್ಯಾತ್ಮಿಕ ಲೇಖನಗಳು ಮತ್ತು ಸರಳ ಪರಿಹಾರಗಳಿಗಾಗಿ https://blogs.myacharya.com/ ಅನ್ನು ನಿರಂತರವಾಗಿ ನೋಡುತ್ತಿರಿ.
ಆಧ್ಯಾತ್ಮಿಕ ವಸ್ತುಗಳಿಗಾಗಿ ಇಲ್ಲಿ ನೋಡಿ : https://myacharya.store

Leave a Reply

Your email address will not be published. Required fields are marked *