Today's Panchang
November 27, 2026
17-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
Daily Horoscope

17-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ

Nov 16, 2026

ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ (Aries)
ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ಆರ್ಥಿಕ ವಾತಾವರಣ ಉತ್ತಮವಾಗಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಸಂಬಂಧಿಕರಿಂದ ನೆರವು ದೊರೆಯಲಿದೆ. ವೃತ್ತಿ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುತ್ತವೆ. ಉದ್ಯೋಗದಲ್ಲಿ ನಿಮ್ಮ ದಕ್ಷತೆಯನ್ನು ಅಧಿಕಾರಿಗಳು ಗುರುತಿಸುತ್ತಾರೆ ಮತ್ತು ವ್ಯವಹಾರಗಳು ಲಾಭದಾಯಕವಾಗಿರುತ್ತವೆ.
ಗಾಯತ್ರಿ ಮಂತ್ರ ಪಠಣೆ ಮಾಡಿ ಒಳ್ಳೆಯದಾಗುವುದು

ವೃಷಭರಾಶಿ (Taurus)
ಆದಾಯಕ್ಕಿಂತ ಖರ್ಚುಗಳು ಅಧಿಕವಾಗಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಅನಿವಾರ್ಯವಾಗಿ ಮಾತಿನ ಚಕಮಕಿ ನಡೆಯುತ್ತದೆ, ಹೆಚ್ಚುವರಿ ಜವಾಬ್ದಾರಿಗಳಿಂದ ನೌಕರರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಸ್ನೇಹಿತರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ವಾಹನ ಪ್ರಯಾಣದಲ್ಲಿ ಹೆಚ್ಚು ಜಾಗರೂಕರಾಗಿರಿ.
ಅನಾಥರಿಗೆ ಅನ್ನದಾನ ಮಾಡಿ

ಮಿಥುನ ರಾಶಿ (Gemini)
ಮಾಡುವ ಕೆಲಸದಲ್ಲಿ ಖರ್ಚು ಮತ್ತು ಶ್ರಮ ಅಧಿಕವಾಗಲಿದೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ, ದೂರದ ಬಂಧುಗಳಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತವೆ, ವೃತ್ತಿ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗ ವಿಷಯದಲ್ಲಿ ಅಧಿಕಾರಿಗಳು ಚರ್ಚೆಗಳಿಗೆ ಹೋಗದಿರುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ,
ನಿಮ್ಮ ಪ್ರಯತ್ನಗಳು ನೆರವೇರಲು ತಾಯಿ ದುರ್ಗೆಯನ್ನು ಸ್ಮರಿಸಿ

ಕಟಕ ರಾಶಿ (Cancer)
ಮನೆಯ ಹೊರಗೆ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ ಮತ್ತು ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಪ್ರಮುಖ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ, ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿಯನ್ನು ಸಾಧಿಸುತ್ತೀರಿ, ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಧಾನವಾಗಿ ಪೂರ್ಣಗೊಳ್ಳುತ್ತದೆ.
ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪ್ರಾರ್ಥಿಸಿ

ಸಿಂಹ ರಾಶಿ (Leo)
ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ವೃತ್ತಿಪರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮಕ್ಕೆ ಅಲ್ಪ ಪ್ರತಿಫಲ ದೊರೆಯುತ್ತದೆ. ಕುಟುಂಬ ಸದಸ್ಯರ ಮಾತುಗಳು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ. ಕೆಲಸದ ವಾತಾವರಣವು ಒತ್ತಡದಿಂದ ಕೂಡಿರುತ್ತದೆ. ನಿರುದ್ಯೋಗ ಪ್ರಯತ್ನಗಳು ಸ್ವಲ್ಪಮಟ್ಟಿಗೆ ನಿಧಾನವಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಕಾಗೆಗಳಿಗೆ ಆಹಾರ ನೀಡಿ ಶುಭವಾಗುವುದು

ಕನ್ಯಾ ರಾಶಿ (Virgo)
ಹೊಸ ವಾಹನ ಮತ್ತು ವಸ್ತು ಲಾಭವನ್ನು ಪಡೆಯುತ್ತೀರಿ. ಹಳೆಯ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ವ್ಯವಹಾರದಲ್ಲಿ ಯಶಸ್ಸು ಸಾದಿಸುತ್ತೀರಿ. ಆತ್ಮೀಯರಿಂದ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸುತ್ತೀರಿ. ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ವೃತ್ತಿಪರ ವ್ಯವಹಾರಗಳು ಸೂಕ್ತವಾಗಿರುತ್ತವೆ. ಉದ್ಯೋಗದಲ್ಲಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಗುರುಬಲಕ್ಕಾಗಿ ಸಿಟ್ರೀನ್ ಮಾಲೆ ಧರಿಸಿ

ತುಲಾ ರಾಶಿ (Libra)
ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಉದ್ಯೋಗಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದರಿಂದ ನಷ್ಟ ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನವಾಗಿ ಸಾಗುತ್ತವೆ. ದೂರ ಪ್ರಯಾಣದಿಂದ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.
ಗುರುಗಳ ಮಾರ್ಗದರ್ಶನ ಪಡೆಯಿರಿ, ಶುಭವಾಗುವುದು

ವೃಶ್ಚಿಕ ರಾಶಿ (Scorpio)
ಕೌಟುಂಬಿಕ ವಿಚಾರಗಳಲ್ಲಿ ಭಿನ್ನಭಿಪ್ರಾಯಗಳು ದೂರವಾಗುತ್ತವೆ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಪ್ರಮುಖ ವ್ಯವಹಾರಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಹೊಸ ವಸ್ತುಗಳ ಖರೀದಿ ಯೋಗವಿದೆ. ವೃತ್ತಿಪರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ, ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ.
ನೀವು ಶಿವರಾಧನೆ ಮಾಡುವುದು ಒಳ್ಳೆಯದು

ಧನಸ್ಸು ರಾಶಿ (Sagittarius)
ಹಣಕಾಸಿನ ಏರಿಳಿತದಿಂದ ಹೊರಬರುತ್ತೀರಿ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭೋಜನ, ಮನೋರಂಜನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಉದ್ಯೋಗಸ್ಥರು ಅಧಿಕಾರಿಗಳ ಕೃಪೆಗೆ ಪಾತ್ರರಾಗುತ್ತೀರಿ.
ತಾಯಿ ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಗೂಬೆ ವಿಗ್ರಹವನ್ನು ಪೂಜಿಸಿ

ಮಕರ ರಾಶಿ (Capricorn)
ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ಉದ್ಯೋಗಿಗಳಿಗೆ ಸ್ಥಾನ ಚಲನೆ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ.
ಭಕ್ತಿಯಿಂದ ನಿಮ್ಮ ಗ್ರಾಮ ದೇವತೆಯನ್ನು ಪ್ರಾರ್ಥಿಸಿ

ಕುಂಭ ರಾಶಿ (Aquarius)
ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಮನೆಯ ಹೊರಗೆ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಅಡೆಚಣೆಗಳು ಎದುರಾಗುತ್ತವೆ. ವೃತ್ತಿ ವ್ಯಾಪಾರದಲ್ಲಿ ಪಾಲುದಾರರೊಂದಿಗಿನ ವಿವಾದಗಳಿಂದ ದೂರವಿರುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.
ಶ್ರೀ ಹನುಮಂತನನ್ನು ಪ್ರಾರ್ಥಿಸುತ್ತ ಸಿಂದೂರವನ್ನು ಹಣೆಗೆ ಹಚ್ಚಿ ಶುಭವಾಗುವುದು

ಮೀನ ರಾಶಿ (Pisces)
ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ, ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡಲಿವೆ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳಲ್ಲಿ ಸಂಗಾತಿಯ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಅಪೇಕ್ಷಿತ ಪ್ರಗತಿ ಸಾಧಿಸಲಾಗುತ್ತದೆ.
ನವಗ್ರಹ ಪ್ರದಾಕ್ಷಣೆ ಹಾಕಿ ಶುಭವಾಗುವುದು

ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

🙏 ಸೂಚನೆ: ಈ ರಾಶಿಭವಿಷ್ಯವು ಸಾಮಾನ್ಯ ರಾಶಿ ಆಧಾರಿತ ಜ್ಯೋತಿಷ್ಯ ವಿವರಣೆಯಾಗಿದೆ. ವೈಯಕ್ತಿಕ ಜಾತಕ, ದಶಾ ಮತ್ತು ಗ್ರಹಸ್ಥಿತಿಗಳ ಆಧಾರದ ಮೇಲೆ ಫಲಗಳಲ್ಲಿ ವ್ಯತ್ಯಾಸವಿರಬಹುದು.

ಪ್ರತಿದಿನದ ರಾಶಿ ಭವಿಷ್ಯ, ಜ್ಯೋತಿಷ್ಯ ಮಾಹಿತಿ, ಆಧ್ಯಾತ್ಮಿಕ ಲೇಖನಗಳು ಮತ್ತು ಸರಳ ಪರಿಹಾರಗಳಿಗಾಗಿ https://blogs.myacharya.com/ ಅನ್ನು ನಿರಂತರವಾಗಿ ನೋಡುತ್ತಿರಿ.
ಆಧ್ಯಾತ್ಮಿಕ ವಸ್ತುಗಳಿಗಾಗಿ ಇಲ್ಲಿ ನೋಡಿ : https://myacharya.store

Leave a Reply

Your email address will not be published. Required fields are marked *