Today's Panchang
September 30, 2026
07-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
Daily Horoscope

07-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

Sep 6, 2026

https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಹಾಗಾಗಿ ನೀವು ಜಾಣ್ಮೆಯಿಂದ ಕೆಲಸ ನಿರ್ವಹಿಸುವ ಮುಂಚೆ ಮುಂಗಡ ಹಣವನ್ನು ಪಡೆದೆ ಆರಂಭಿಸಿ. ಇದರಿಂದ ನಿಮಗೂ ನೆಮ್ಮದಿ ಉಂಟಾಗುವುದು. ಮಾನಸಿಕ ಭಯ ನೀಮ್ಮ ದೈರ್ಯಗೆಡಿಸಬಹುದು. ಸಕಾರಾತ್ಮಕ ಚಿಂತನೆ ಮತ್ತು ಮುಂದಿನ ಉಜ್ವಲವಾದ ಭವಿಷ್ಯದ ಬಗ್ಗೆ ಚಿಂತಿಸಿ ಮುನ್ನಡೆಯಿರಿ.
ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ.

ವೃಷಭರಾಶಿ
ಮನಸ್ಸಿನ ಹೊಯ್ದಾಟ ಇದ್ದರೂ ಸಂಕಲ್ಪಿತ ಕಾರ್ಯಸಿದ್ಧಿಗೆ ಅವಕಾಶ ಕೂಡಿ ಬರುವುದು. ಆರೋಗ್ಯದ ಮೇಲೆ ಗಮನವಿರಲಿ. ಇಂದಿನ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುವವು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು.
ಗುರುಗಳ ಮಾರ್ಗ ದರ್ಶನ ಪಡೆಯಿರಿ.

ಮಿಥುನ ರಾಶಿ
ಸಕಲ ಸಂಪತ್ತು ಇದ್ದರೂ ಅದನ್ನು ಅನುಭವಿಸಲು ಆಗುತ್ತಿಲ್ಲ. ಎಲ್ಲವೂ ಎದುರಿಗೆ ಇದ್ದರೂ ಅದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ನಿತ್ಯ ಜೀವನಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಕುಲದೇವರನ್ನು ಆರಾಧನೆ ಮಾಡಿ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿದಲ್ಲಿ ಯಶಸ್ಸು ಮತ್ತು ಮನ್ನಣೆ ನಿಮ್ಮದಾಗುತ್ತದೆ.
ಸಾಯಿಬಾಬಾರ ದರ್ಶನ ಮಾಡಿ.

ಕಟಕ ರಾಶಿ
ನಿಮ್ಮನ್ನು ನೀವು ವಿಮರ್ಶಿಸುವ ಸಕಾಲ ಇದು. ನೀವು ಸಾಗಿ ಬಂದ ದಾರಿಯನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ. ಇದು ನಿಮ್ಮ ಮುಂದಿನ ಬಾಳಿನ ಮಾರ್ಗಸೂಚಿ ಆಗುವುದು. ನಿಮ್ಮ ಶಕ್ತಿಯ ಸೂಕ್ತ ನಿರ್ವಹಣೆಯಿಂದ ಕಾರ್ಯದಲ್ಲಿ ಜಯ ಹೊಂದಬೇಕು. ಮಾನಸಿಕ ಶಾಂತಿಗಾಗಿ ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ತಂದೆತಾಯಿಯರ ಆಶೀರ್ವಾದ ಪಡೆಯಿರಿ.

ಸಿಂಹ ರಾಶಿ
ನಿಮ್ಮ ಬಗೆಗಿನ ಕೆಲವು ವಿಚಾರಗಳನ್ನು ತಿಳಿದು ನಿಮ್ಮ ಪ್ರಗತಿಯನ್ನು ಚಿವುಟಿ ಹಾಕುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವರು. ಇಂತಹ ಜನರಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು.
ಹನುಮಾನ್‌ ಚಾಲೀಸ್‌ ಪಠಣ ಮಾಡಿ.

ಕನ್ಯಾ ರಾಶಿ
ಏಕಾಏಕಿ ದೊಡ್ಡ ದೊಡ್ಡ ಯೋಜನೆಗಳನ್ನು ಬೆನ್ನು ಹತ್ತದಿರಿ. ಅಟ್ಟವನ್ನು ಏರದವರು ಬೆಟ್ಟವನ್ನು ಏರಬಹುದೇ? ಹಾಗಾಗಿ ತಾಳ್ಮೆಯಿಂದ ನಿಮ್ಮ ಮುಂದೆ ಇರುವ ಸರಳ ಕೆಲಸಗಳನ್ನು ಮನಸ್ಸುಕೊಟ್ಟು ಮಾಡಿ ಮತ್ತು ಆತ್ಮವಿಶ್ವಾಸ ಗಳಿಸಿಕೊಳ್ಳಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ.
ಶ್ರೀ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ನೀಡಿ.

ತುಲಾ ರಾಶಿ
ನಿಮ್ಮಿಂದಲೇ ಸಮಗ್ರ ವಿಷಯವನ್ನು ತಿಳಿದುಕೊಂಡು ಅದಕ್ಕೆ ಬಣ್ಣ ಹಚ್ಚಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಜನರಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ನಿಮ್ಮ ಬಾಸ್ ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ. ದೂರ ಪ್ರಯಾಣದಿಂದ ತೊಂದರೆಯುಂಟಾಗುವುದು,
ಮನೆ ದೇವರನ್ನು ಮನದಲ್ಲಿ ನೆನೆಯಿರಿ.

ವೃಶ್ಚಿಕ ರಾಶಿ
ನಿಮ್ಮ ಅನೇಕ ವಿಚಾರಗಳನ್ನು ಸುಮ್ಮನೆ ಯಾರ ಜತೆಗೂ ಹಂಚಿಕೊಳ್ಳದಿರಿ. ಹೊರಳು ದಾರಿಯಲ್ಲಿರುವ ನಿಮ್ಮ ದಾರಿ ತಪ್ಪಿಸಲು ಹಲವರು ಕಾದಿದ್ದಾರೆ. ಆದರೆ ಸತ್ಯ ನಿಷ್ಠೆಗೆ ಯಾವಾಗಲು ಜಯ. ಹಾಗಾಗಿ ನೀವು ಗೆಲುವಿನ ನಗು ಬೀರುವಿರಿ. ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ.
ಶ್ರೀ ಗುರುರಾಘವೇಂದ್ರರ ಸ್ಮರಣೆ ಮಾಡಿ.

ಧನುಸ್ಸು ರಾಶಿ
ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು ನೀವು ಎದುರಿಸಬೇಕಾಗುತ್ತದೆ. ಗೆಲ್ಲುವುದು ನಿಮಗೆ ಸಾಧ್ಯವಾದರೂ ನಿಮ್ಮ ಚೈತನ್ಯವನ್ನು ಕಲಕುವ ವಿಚಾರ ಹೆಚ್ಚಾಗವು ಸಾಧ್ಯತೆ ಇದೆ. ಬಯಸಿದ ಕಾರ್ಯವು ಈಡೇರಲು ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ. ಸಹೋದರರ ಸಂಗಡ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುವುದು.
ಮನೆ ದೇವರ ಪ್ರಾರ್ಥನೆ ಹಾಗು ದರ್ಶನದಿಂದ ಶುಭ ಫಲ.

ಮಕರ ರಾಶಿ
ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು, ನಡೆನುಡಿಯಲ್ಲಿ ಸೌಮ್ಯತೆ ಇರಲಿ, ಹಣದ ಪರಿಸ್ಥಿತಿ ಈ ದಿನ ಸುಧಾರಿಸುತ್ತದೆ. ವಿಳಂಬಿತ ಪಾವತಿಗಳನ್ನು(ಸಾಲವನ್ನು) ತಪ್ಪದೆ ಈ ದಿನ ಪಾವತಿ ಮಾಡುವುದು ಒಳಿತು.
ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ.

ಕುಂಭ ರಾಶಿ
ಮಾನಸಿಕ ಕಸಿವಿಸಿ ಇದ್ದರೂ ಅದೇ ನಿಮ್ಮ ಬೆಂಗಾವಲಿಗೆ ಬರುವುದು. ಒಂದು ನಿರ್ದಿಷ್ಟ ಕಾರ್ಯವನ್ನು ಮಾಡಲು ಹವಣಿಸುತ್ತಿದ್ದ ನಿಮಗೆ ಭಗವಂತನೇ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ತಪ್ಪಿಸುವನು. ಇದರಿಂದ ಮುಂದೆ ಒಳಿತಾಗುವುದು, ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯದಿಂದ ನಿರ್ಣಯ ತೆಗೆದುಕೊಂಡ ವಿಚಾರಗಳು ನಿಮಗೆ ಗೌರವ ಮತ್ತು ಕೀರ್ತಿಯನ್ನು ತಂದು ಕೊಡುವುದು.
ತಾಯಿ ದುರ್ಗೆಯನ್ನು ಪ್ರಾರ್ಥಿಸಿ.

ಮೀನ ರಾಶಿ
ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ. ನೂತನ ಮಿತ್ರರು ಸೇರ್ಪಡೆ ಮಾಡಿಕೊಳ್ಳಿ. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ ಇದೆ.
ಶಿವನ ಮಂತ್ರವನ್ನು ಪಠಿಸಿ.

🪀 8500 33 3435
ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

Leave a Reply

Your email address will not be published. Required fields are marked *