21-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ ವ್ಯಾಪಾರಸ್ಥರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ ಬರೀ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ಯಾವುದೇ ಕೆಲಸವನ್ನು ಸಕಾಲಕ್ಕೆ ಮಾಡಲಾಗುತ್ತಿಲ್ಲ ಎಂಬ ಕೊರಗು ಕಾಡುತ್ತದೆ. ಸ್ನೇಹಿತರಿಂದ ದನ ಸಹಾಯವಾಗುವುದು,
ಹಿರಿಯರ ಸಲಹೆಯನ್ನು ಪಾಲಿಸಿ, ಆದಷ್ಟು ಭಗವಂತನ ಮೊರೆ ಹೋಗುವುದು ಒಳ್ಳೆಯದು.

ವೃಷಭರಾಶಿ
ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆಗಳಿರುವುದರಿಂದ, ನಾಳೆಯ ಕೆಲಸಗಳನ್ನು ಬೇಗನೆ ಪೂರ್ಣಗೊಳಿಸಿ, ಸ್ಥಳ ಬದಲಾವಣೆಯ ಸಾಧ್ಯತೆ ಇದೆ ಅಥವಾ ಮಾಡುವ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು.
ಶ್ರೀ ಪಾರ್ವತಿ ಪರಮೇಶ್ವರನನ್ನು ಪ್ರಾರ್ಥಿಸಿ.

ಮಿಥುನ ರಾಶಿ
ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗಾಯಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಮೋಸ ಮಾಡುವವರು ನಿಮ್ಮ ಸುತ್ತಲೂ ಇರುವರು, ಮಾಡುವ ಕೆಲಸದಲ್ಲಿ ಜಾಗ್ರತೆ ವಹಿಸಿ, ಸರಿಯಾಗಿ ಸಾಗುತ್ತಿರುವ ಕಾರ್ಯ ವಿಧಾನಗಳಲ್ಲಿ ಬದಲಾವಣೆ ಬೇಡ. ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ವ್ಯಾಪಾರದಲ್ಲಿ ಅಭಿವೃದ್ಧಿ ಪಡೆಯಬೇಕೆಂದರೆ,
ಕುಲದೇವರನ್ನು ಸ್ಮರಿಸಿ. ಜತೆಗೆ ಗ್ರಾಮ ದೇವತೆಗೆ ಪೂಜೆ ಮಾಡಿಸಿ.

ಕಟಕ ರಾಶಿ
ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಅಧಿಕ ಖರ್ಚು ಮಾಡುವುದು ಉತ್ತಮವಲ್ಲ, ಸ್ನೇಹಿತರ ಸಹಾಯ ಪಡೆಯಿರಿ, ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ.. ದೇವರಮನೆಯಲ್ಲಿ ಶಂಖವನ್ನಿಟ್ಟು ಪೂಜಿಸಿ,
ಶನಿ ಸ್ತೋತ್ರವನ್ನು ಪಠಿಸಿ.

ಸಿಂಹ ರಾಶಿ
ನಿಮ್ಮ ಮನಸ್ಸು ಗೊಂದಲಕ್ಕೊಳಗಾಗಬಹುದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮಗೆ ಆಗದವರು ಕೆಲಸದ ಸ್ಥಳದಲ್ಲಿ ನಿಮ್ಮನ್ನು ಕೆಣಕುವ ಸಾಧ್ಯತೆ ಇದೆ. ಅವರೆಲ್ಲರನ್ನು ನಿಮ್ಮ ಬುದ್ಧಿಬಲದಿಂದ ದೂರ ಇಡಿ. ಈ ದಿನ ದೂರ ಪ್ರಯಾಣ ಮಾಡುವುದು ಬೇಡ, ಪ್ರಯಾಣದ ಸಮಯದಲ್ಲಿ ಜಾಗ್ರತೆ ಇರಲಿ.
ಶನಿ ಮಂತ್ರವನ್ನು ಪಠಿಸಿ. ಆಂಜನೇಯ ದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ

ಕನ್ಯಾ ರಾಶಿ
ಅಧಿಕ ಖರ್ಚು ಇರುತ್ತದೆ. ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದರಿಂದ ನೀವು ಹಮ್ಮಿಕೊಂಡ ಕಾರ್ಯಗಳನ್ನು ಧೈರ್ಯದಿಂದ ಮುನ್ನುಗ್ಗಿ ಮಾಡಬಹುದು. ಎಲ್ಲರನ್ನು ನಗುಮುಖದಿಂದ ಸ್ವಾಗತಿಸುವಿರಿ. ಎಲ್ಲಾ ರೀತಿಯಿಂದಲೂ ಈ ದಿನ ಉತ್ತಮ ಫಲ ಪಡೆಯುವ ಯೋಗವಿದೆ.
ನಿಮ್ಮ ಮನೆದೇವರ ಸ್ಮರಣೆ ಮಾಡಿ.

ತುಲಾ ರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ವಿದೇಶದಿಂದ ಅಥವಾ ದೂರದೂರಿನಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಈ ದಿನ ಕೈಗೂಡುವುದು.
ಮನೋನಿಯಾಮಕ ರುದ್ರದೇವರನ್ನು ಪ್ರಾರ್ಥಿಸಿ ಶುಭವಾಗುವುದು

ವೃಶ್ಚಿಕ ರಾಶಿ
ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ. ಇದು ಕೆಲಸದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ನಿಮಗಿಂತ ಹೆಚ್ಚಿನ ಬುದ್ಧಿವಂತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಸದ್ಯದ ಗ್ರಹಸ್ಥಿತಿ ಉತ್ತಮವಾಗಿಲ್ಲ. ಕುಟುಂಬದ ಜೊತೆ ಯಾವುದೇ ರೀತಿಯ ಜಗಳ ಬೇಡ, ಈ ದಿನ ಮಡದಿ ಮಕ್ಕಳೇ ನಿಮ್ಮನ್ನು ಆದರಿಸದೆ ಹೋಗುವ ಸಾಧ್ಯತೆ ಇದೆ.
ಶ್ರೀ ಗಾಯತ್ರಿ ಮಂತ್ರ ಪಠಿಸಿ.

ಧನುಸ್ಸು ರಾಶಿ
ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಶುಭ ಕಾರ್ಯಗಲ್ಲ ಪ್ರಸ್ಥಾಪವಿರುತ್ತದೆ.
ಹನುಮಾನ್ ಚಾಲೀಸಾ ಪಠಿಸಿ.

ಮಕರ ರಾಶಿ
ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಆದರೆ ಸ್ನೇಹಿತರ ಸಹಾಯದಿಂದ ಸಮಸ್ಯೆ ಬಗೆಹರಿಯಲಿದೆ. ಮನೆಯಲ್ಲಿ ಕಲಹದ ವಾತಾವರಣ ನಿರ್ಮಾಣವಾಗದಿರಲು ಸರ್ವ ಪ್ರಯತ್ನ ನಡೆಸಬೇಕು. ಕೆಲಸದ ಸ್ಥಳದಲ್ಲಿ ಚಾಡಿ ಚುಚ್ಚುವರು ಅಧಿಕವಾಗಿರುತ್ತಾರೆ. ಅದಕ್ಕಾಗಿ ತಲೆ ಕೆಡಿಸಿಕೊಳ್ಳದೆ ಮುಂದುವರೆಯಿರಿ. ನಿಮ್ಮಿಂದ ಸಹಾಯ ಬಯಸಿ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ.
ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,

ಕುಂಭ ರಾಶಿ
ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ವಾಹನ ಚಲಾಯಿಸುವಾಗ ಹೆಚ್ಚರದಿಂದಿರಿ, ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.
ಈಶ್ವರನ ಪ್ರಾರ್ಥನೆ ಮಾಡಿ.

ಮೀನ ರಾಶಿ
ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಇಂದು ನಿಮಗೆ ಶುಭ ತರುವ ದಿನವಾಗಿದೆ, ದಿನವಿಡೀ ಲವಲವಿಕೆಯಿಂದ ಇರುವಿರಿ, ಜನರು ನಿಮ್ಮ ಮಾತು ಮತ್ತು ವಿಚಾರಗಳನ್ನು ಗೌರವಿಸುವರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏರುಪೇರು, ಪ್ರಯಾಣ ಮಾಡುವಾಗ ಜಾಗ್ರತೆ ಇರಲಿ.
ಗಣಪತಿಯ ಪ್ರಾರ್ಥನೆ ಮಾಡಿ.

ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q