Today's Panchang
September 30, 2026
19-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ
Daily Horoscope

19-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ

Sep 18, 2026

https://whatsapp.com/channel/0029Va9N1nYFsn0kuTpiaH3Q

ಮೇಷರಾಶಿ
ಆದಾಯದ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಸುಗಮವಾಗಿ ನಡೆಯಲಿವೆ, ನೀವು ಕೆಲಸದ ಸ್ಥಳದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಇಂದು ಕೆಲವು ಅರೆಕಾಲಿಕ ಕೆಲಸವನ್ನು ಮಾಡಲು ನೀವು ಸ್ನೇಹಿತರಿಂದ ಸಲಹೆ ಪಡೆಯಬಹುದು. ನಿಮ್ಮ ಸಂಗಾತಿಯ ಅನಾರೋಗ್ಯದ ಕಾರಣ ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು,
ನಿಮ್ಮ ಮನೆದೇವರ ಸ್ಮರಣೆ ಮಾಡಿ.

ವೃಷಭರಾಶಿ
ಇಂದು ನಿಮಗೆ ಸಂತೋಷದ ದಿನವಾಗಲಿದೆ. ಇಂದು ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಏಕಕಾಲದಲ್ಲಿ ಹಲವು ಕೆಲಸಗಳನ್ನು ಕೈಯಲ್ಲಿಟ್ಟುಕೊಂಡು ತೊಂದರೆ ಅನುಭವಿಸುವಿರಿ. ನಿಮ್ಮ ಕುಟುಂಬದಸದಸ್ಯರೊಂದಿಗೆ ವಿವಾದ ಮಾಡಿಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ಕೆಲವು ಶತ್ರುಗಳು ಇಂದು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ, ಕುಟುಂಬದ ಮಹಿಳಾ ಸದಸ್ಯರ ಆರೋಗ್ಯವು ಕಳವಳಕ್ಕೆ ಕಾರಣವಾಗಬಹುದು.
ಗ್ರಾಮ ದೇವತೆಗೆ ಪೂಜೆ ಮಾಡಿಸಿ.

ಮಿಥುನ ರಾಶಿ
ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಉದ್ಯೋಗದಲ್ಲಿರುವ ಜನರು ಅಧಿಕಾರಿಗಳ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು, ಈ ದಿನ ಮರೆತರೂ ಯಾರಿಗೂ ಸಾಲ ಕೊಡಬೇಡಿ
ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ.

ಕಟಕ ರಾಶಿ
ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ಬಳಲಿಕೆ ತೋರಿಬರುವುದು. ಆಸ್ತಿ ಸಂಬಂಧಿತ ವಿವಾದದಲ್ಲಿ ನೀವು ನಿಮ್ಮ ತಂದೆಯ ಸಲಹೆಯನ್ನು ಪಡೆಯಬೇಕು. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ. ನಿಮ್ಮ ಕೆಲಸದಲ್ಲಿ ನೀವು ಇಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು.
ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ.

ಸಿಂಹ ರಾಶಿ
ಈ ದಿನ ನೀವು ಮಾಡುವ ಕೆಲಸವು ಮಂದಗತಿಯಲ್ಲಿ ಸಾಗುವುದು. ನೀವು ಆಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು. ಇಂದು ನಿಮ್ಮ ಸಾಮರ್ಥ್ಯವನ್ನು ತೋರಿಸಲು ನಿಮಗೆ ಅವಕಾಶವಿದೆ. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ನಿಮ್ಮ ನಡವಳಿಕೆಯಿಂದ ಸಹೋದ್ಯೋಗಿಗಳಿಗೆ ಮನಸ್ತಾಪ ಬರುವುದು, ಜಾಗ್ರತೆಯಿಂದ ಮಾತು ಮತ್ತು ಕೆಲಸಗಳನ್ನು ಮಾಡಿ
ಶ್ರೀ ಆಂಜನೇಯ ಸ್ತೋತ್ರ ಪಠಿಸಿ.

ಕನ್ಯಾ ರಾಶಿ
ಕೆಲಸ ಕಾರ್ಯಗಳ ವಿಚಾರದಲ್ಲಿ ಟೀಕೆ ಟಿಪ್ಪಣಿಗಳು ಬರುವುದು. ನೀವು ಈ ಹಿಂದೆ ತಾಳಿದ ತಪ್ಪು ನಿರ್ಧಾರಗಳು ನಿಮ್ಮನ್ನು ಭಾದಿಸುತ್ತವೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಗಳಿಸಲು ಸಾಧ್ಯವಾಗುತ್ತದೆ.
ದೇವಸ್ತಾನಕ್ಕೆ ತುಳಸಿಯನ್ನು ನೀಡಿ.

ತುಲಾ ರಾಶಿ
ಇಂದು ನಿಮಗೆ ಮಧ್ಯಮ ಫಲಪ್ರದವಾಗಲಿದೆ. ನೀವು ಸ್ನೇಹಿತರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು, ಆದರೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಜಾಗರೂಕರಾಗಿರಬೇಕು, ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.
ಶ್ರೀಮಹಾಲಕ್ಷ್ಮಿಯನ್ನು ಪೂಜಿಸಿ, ಒಳಿತಾಗುವುದು

ವೃಶ್ಚಿಕ ರಾಶಿ
ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ. ವಾಹನ ಚಲಾಯಿಸುವಾಗ ಜಾಗ್ರತೆಯಿಂದ ಇರಿ, ಸಾಲದ ವಿಚಾರವಾಗಿ ಯಾರಿಗೂ ಸಹಾಯ ಮಾಡಬೇಡಿ
ಜನರು ಸಮಸ್ಯೆಗಳೊಂದಿಗೆ ನಿಮ್ಮ ಬಳಿಗೆ ಬಂದರೆ, ಅವರನ್ನು ನಿರ್ಲಕ್ಷಿಸಿ.
ಅನಾಥರಿಗೆ ಅನ್ನದಾನ ಮಾಡಿ.

ಧನುಸ್ಸು ರಾಶಿ
ದೂರದ ಪ್ರವಾಸ ಮಾಡುವ ತಯಾರಿ ನಡೆಸುವಿರಿ, ವ್ಯಪಾರದಲ್ಲಿ ಲಾಭ ಬರುವ ಸಾಧ್ಯತೆ ಇದೆ, ನೂತನ ವಾಹನ ಖರೀದಿಸಲು ಒಳ್ಳೆಯ ದಿನ, ಆರೋಗ್ಯ ಸದೃಢವಾಗಿರುತ್ತದೆ. ವಿದೇಶ ಪ್ರವಾಸದ ಕೆಲಸಗಳನ್ನು ಪೂರ್ಣಗೊಳಿಸುವಿರಿ, ನಿಮ್ಮ ವಸ್ತುಗಳನ್ನು ನೀವು ಕಾಳಜಿ ವಹಿಸದಿದ್ದರೆ, ಅವು ಕಳೆದುಹೋಗುವ ಅಥವಾ ಕಳ್ಳತನವಾಗುವ ಸಾಧ್ಯತೆಯಿದೆ. ಇಂದು ಸಹೋದರರು ಸಹಾಯ ಮಾಡುವರು
ದನ ಕರುಗಳಿಗೆ ಆಹಾರ ನೀಡಿ, ಶುಭಫಲ ಲಭಿಸುವುದು.

ಮಕರ ರಾಶಿ
ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ. ಬಂಗಾರ ಬೆಳ್ಳಿ ಖರೀದಿಸಲು ಉತ್ತಮ ದಿನ, ಸಹಾಯಕ್ಕಾಗಿ ಬಂದವರಿಗೆ ಮನ ನೋಯಿಸದಿರಿ, ಧಾರ್ಮಿಕ ಭಾವನೆಗಳಿಂದಾಗಿ, ನೀವು ಯಾತ್ರಾ ಸ್ಥಳಕ್ಕೆ ಪ್ರಯಾಣಿಸುತ್ತೀರಿ ಕುಟುಂಬದೊಡನೆ ಸಮಯ ಕಳೆಯಿರಿ.
ಕಾಳಿಕಾದೇವಿಯ ದರ್ಶನ ಮಾಡಿ.

ಕುಂಭ ರಾಶಿ
ನಿಮ್ಮ ಕುಟುಂಬದಲ್ಲಿ ಇಂದು ಕೆಲವು ಸಮಸ್ಯೆಗಳನ್ನು ಬರಬಹುದು. ಹಣದ ಕೊರತೆಯಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಕುಂಠಿತವಾಗಬಹುದು. ಇಂದು ವ್ಯಾಪಾರ ಮಾಡುವ ಜನರು ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಗಳಿಸುವಿರಿ. ಜೊತೆಗೆ ತೊಂದರೆಗಳನ್ನು ಎದಿರಿಸುವಿರಿ, ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ.
ತಾಯಿ ಚಾಮುಂಡೇಶ್ವರಿಯನ್ನು ನೆನೆಯಿರಿ

ಮೀನ ರಾಶಿ
ಇಂದು ನಿಮಗೆ ಸಂತಸದ ದಿನವಾಗಿರುತ್ತದೆ. ನಿಮ್ಮ ಹಳೆಯ ಕೆಲಸವನ್ನು ಪೂರ್ತಿ ಮಾಡಿ ಮುಗಿಸುವಿರಿ, ನಿಮ್ಮ ಆಸೆ ಈಡೇರುತ್ತದೆ. ವ್ಯವಹಾರದಲ್ಲಿ ತೊಂದರೆ ಆಗಬಹುದು. ಪಾಲುದಾರಿಕೆ ವ್ಯವಹಾರ ಮಾಡುವುದು ಬೇಡ, ಹೆಚ್ಚಿನ ಪ್ರಯಾಣವು ಕಿರಿಕಿರಿಯನ್ನು ಉಂಟುಮಾಡಬಹುದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ, ಇಂದು ನೀವು ಹೆಚ್ಚುವರಿ ಹಣವನ್ನು ಗಳಿಸಬಹುದು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮೇಲೆದೆ.

ಅಥವಾ ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿ
👇👇👇👇👇
https://whatsapp.com/channel/0029Va9N1nYFsn0kuTpiaH3Q

Leave a Reply

Your email address will not be published. Required fields are marked *